ಎಡಪಕ್ಷಗಳಿಗೆ ಸೆಡ್ಡು ಹೊಡೆದು ಸರ್ಕಾರದ ಭವಿಷ್ಯವನ್ನೇ ಡೋಲಾಯಮಾನ ಮಾಡಿದ್ದ ಮನಮೋಹನ್ ಸಿಂಗ್ ವಿಶ್ವಾಸಮತಯಾಚನೆಗಾಗಿ ಎದೆಯುಬ್ಬಿಸಿಕೊಂಡು ಸಂಸತ್ಭವನ ಪ್ರವೇಶಿಸಿದ್ದು... ತನ್ನನ್ನು ಪ್ರಶ್ನಿಸಲು ಬಂದ ಪತ್ರಕರ್ತರಿಗೆ ಏನನ್ನೂ ಹೇಳದೆ ನಗುನಗುತ್ತಾ ಕೈಬೆರಳುಗಳನ್ನೆತ್ತಿ ಗೆಲುವಿನ ಸಂಜ್ಞೆ ಮಾಡಿದ್ದು... ವಿಶ್ವಾಸಮತಯಾಚನೆಯಲ್ಲಿ ಗೆದ್ದ ಮರುಕ್ಷಣದಲ್ಲಿಯೇ ಕಾಂಗ್ರೆಸ್ ಸಂಸದರು ‘ಸಿಂಗ್ ಈಸ್ ಕಿಂಗ್’ ಎಂದು ಹರ್ಷೋದ್ಗಾರ ಮಾಡಿದ್ದು... ಎಲ್ಲವೂ ಮೊನ್ನೆಮೊನ್ನೆ ನಡೆದಂತಿದೆ.
ಇಂತಹ ಒಂದು ಕ್ಷಣಕ್ಕಾಗಿಯೇ ಮನಮೋಹನ್ ಸಿಂಗ್ ಕಾಯುತ್ತಿದ್ದರೋ ಏನೋ ಎಂದು ಆಗ ಅನಿಸಿತ್ತು. ಯಾಕೆಂದರೆ ಪ್ರಧಾನಿಯಾಗಲು ಒಪ್ಪಿಕೊಂಡ ದಿನದಿಂದ ಅವಮಾನ, ಹೀಯಾಳಿಕೆಯ ನುಡಿಗಳನ್ನೇ ಅವರು ಕೇಳುತ್ತಾ ಬಂದಿದ್ದು. ಸಾಮಾನ್ಯವಾಗಿ ಬಳಸುವ ಭಾಷೆ ಬಗ್ಗೆ ಎಚ್ಚರದಿಂದ ಇರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೇ ಮನಮೋಹನ್ಸಿಂಗ್ ಅವರನ್ನು ‘ನಿಕ್ಕಮ್ಮ (ಕೈಲಾಗದವ)’ ‘ದುರ್ಬಲ’, ‘ಅದೃಶ್ಯ’ ಪ್ರಧಾನಿ ಎಂದೆಲ್ಲಾ ಹೀಗಳೆದಿದ್ದರು.
ಅದಕ್ಕೆಲ್ಲ ಉತ್ತರ ನೀಡುವಂತಿತ್ತು ಮನಮೋಹನ್ ಸಿಂಗ್ ಅವರ ಆ ದಿನದ ಧೀರ, ಗಂಭೀರ ನಡಿಗೆ ಮತ್ತು ಹುಸಿನಗೆ.
2008ರ ಜುಲೈ 22ರ ಆ ದಿನವನ್ನು (ವಿಶ್ವಾಸಮತಯಾಚನೆ ದಿನ) ಮನಮೋಹನ್ಸಿಂಗ್ ಮತ್ತು ಅವರ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಆ ದಿನವೇ ತಾನೊಬ್ಬ ದುರ್ಬಲ ಪ್ರಧಾನಿ ಅಲ್ಲ ಎಂದು ಮನಮೋಹನ್ ಸಿಂಗ್ ಸಾಬೀತುಪಡಿಸಿದ್ದು ಮತ್ತು ಅದೇ ದಿನ ಅವರ ಬಿಳಿಬಟ್ಟೆಯ ಮೇಲೆ ಮೊದಲ ಕಳಂಕದ ಕಲೆ ಅಂಟಿಕೊಂಡದ್ದು.
ತುಂಬು ವಿಶ್ವಾಸದಿಂದ ಮನಮೋಹನ್ ಸಿಂಗ್ ಲೋಕಸಭೆ ಪ್ರವೇಶಿಸಿದ್ದ ಮರುಗಳಿಗೆಯಲ್ಲಿಯೇ ಬಿಜೆಪಿಯ ಮೂವರು ಸದಸ್ಯರಾದ ಅಶೋಕ್ ಅರ್ಗಲ್, ಫಗನ್ಸಿಂಗ್ ಕುಲಸ್ಥೆ ಮತ್ತು ಮಹಾವೀರ ಭಗೋರಾ ಅವರು ಎರಡು ದೊಡ್ಡ ಚೀಲಗಳನ್ನು ಎತ್ತಿಕೊಂಡು ಸಭಾಧ್ಯಕ್ಷರ ಪೀಠದ ಮಂದಿನ ಅಂಗಳದ ಕಡೆ ನುಗ್ಗಿದ್ದರು.
ಅವರ ಕೈಯೊಳಗೆ ಸಾವಿರ ರೂಪಾಯಿಗಳ ನೋಟಿನ ಕಂತೆಗಳಿದ್ದವು. ಒಂದು ಕ್ಷಣ ಇಡೀ ಸದನ ಸ್ಥಬ್ದವಾಗಿತ್ತು. ‘ಇದು ವಿಶ್ವಾಸಮತದ ಪರವಾಗಿ ಮತಚಲಾಯಿಸಲು ತಮಗೆ ಮುಂಗಡವಾಗಿ ಕೊಟ್ಟಿದ್ದ ಒಂದು ಕೋಟಿ ರೂಪಾಯಿ. ಇದನ್ನು ಅಮರ್ಸಿಂಗ್ ಸೂಚನೆ ಮೇರೆಗೆ ಅವರ ಸಹಾಯಕರು ತಂದುಕೊಟ್ಟಿದ್ದರು’ ಎಂದು ಅಶೋಕ್ ಅರ್ಗಲ್ ಕೂಗಾಡುತ್ತಿದ್ದರು. ಇತ್ತ ಸೆಂಟ್ರಲ್ ಹಾಲ್ನ ಸೈಡ್ವಿಂಗ್ನಲ್ಲಿ ಕರ್ನಾಟಕದ ಮೂವರು ಬಿಜೆಪಿ ಲೋಕಸಭಾ ಸದಸ್ಯರಾದ ಎಚ್.ಟಿ. ಸಾಂಗ್ಲಿಯಾನಾ, ಮಂಜುನಾಥ ಕುನ್ನೂರು ಮತ್ತು ಮನೋರಮಾ ಮಧ್ವರಾಜ್ ಹಾಗೂ ಜೆಡಿ (ಎಸ್) ಸದಸ್ಯ ಶಿವಣ್ಣ ಕಾಂಗ್ರೆಸ್ ಜತೆ ಕೈಜೋಡಿಸಲು ವೇಷ ಬದಲಿಸುತ್ತಿದ್ದರು. ಎದೆಯುಬ್ಬಿಸಿಕೊಂಡು ಬಂದಿದ್ದ ಮನಮೋಹನ್ ಸಿಂಗ್ ಗದ್ದಲದ ನಡುವೆಯೇ ಸೋನಿಯಾಗಾಂಧಿ ಜತೆಗೂಡಿ ತಲೆತಗ್ಗಿಸಿಕೊಂಡು ಸದನದಿಂದ ಹೊರನಡೆದಿದ್ದರು.
ಇವೆಲ್ಲವೂ ಹಳೆಯ ಕತೆ, ವಿಕಿಲೀಕ್ಸ್ ಕೇಬಲ್ಗಳು ಬಹಿರಂಗಪಡಿಸಿದ್ದರಲ್ಲಿ ಕೂಡಾ ಹೊಸದೇನಿಲ್ಲ, ಒಂದಷ್ಟು ಹೊಸ ಪುರಾವೆಗಳು ಸಿಕ್ಕಿವೆ ಅಷ್ಟೇ.ಆದರೆ ಸರ್ಕಾರವನ್ನೇ ಪತನದ ಅಂಚಿಗೆ ತಂದು ನಿಲ್ಲಿಸುವಂತಹ ಅಪಾಯಕ್ಕೆ ಆಹ್ವಾನ ನೀಡುವಷ್ಟು ಮತ್ತು ಅಧಿಕಾರ ಉಳಿಸಲು ಸಂಸದರ ಖರೀದಿಯಂತಹ ಹೀನಕೃತ್ಯಕ್ಕೆ ಇಳಿಯುವಷ್ಟು ಅಮೆರಿಕದ ಜತೆಗಿನ ನಾಗರಿಕ ಪರಮಾಣು ಒಪ್ಪಂದ ದೇಶಕ್ಕೆ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ ವಿಕಿಲೀಕ್ಸ್ ಕೇಬಲ್ಗಳಲ್ಲಿಯೂ ಈ ವರೆಗೆ ಉತ್ತರ ಸಿಕ್ಕಿಲ್ಲ. 2004ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪ್ರಸ್ತಾವವೇ ಇರಲಿಲ್ಲ. ಅದರ ನಂತರ ಯುಪಿಎ ಎಂಬ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗ ರಚನೆಯಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿಯೂ ಇದರ ಉಲ್ಲೇಖ ಇರಲಿಲ್ಲ.
ಹೀಗಿದ್ದರೂ ಈ ಒಪ್ಪಂದವನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಡುವ ಅವಶ್ಯಕತೆ ಏನಿತ್ತು? ಇದಕ್ಕೆ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ಉತ್ತರ ಇಂಧನ ಕೊರತೆ. ಭಾರತ ಇಂಧನ ಕೊರತೆಯಿಂದ ಬಳಲುತ್ತಿರುವುದು ನಿಜ. ಆದರೆ ನಾಗರಿಕ ಪರಮಾಣು ಒಪ್ಪಂದದಿಂದ ಈ ಕೊರತೆ ನೀಗುವುದೇ?
‘ಇಡೀ ವಿಶ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ 35 ಅಣುಸ್ಥಾವರಗಳಲ್ಲಿ 24 ಏಷ್ಯಾದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ವೇಗದ ಓಟ ಭಾರತಕ್ಕೆ ಅನಿವಾರ್ಯ’ ಎಂದು ಒಪ್ಪಂದವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಹೇಳಿದಂತೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತವೇನು ಹಿಂದೆ ಉಳಿದಿರಲಿಲ್ಲ.
ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಭಾರತದಲ್ಲಿ ಆರು ಅಣುಸ್ಥಾವರಗಳು ನಿರ್ಮಾಣಗೊಳ್ಳುತ್ತಿತ್ತು. ಏಳು ಅಣುಸ್ಥಾವರಗಳನ್ನು ನಿರ್ಮಿಸುತ್ತಿದ್ದ ಚೀನಾ ದೇಶವೊಂದೇ ಭಾರತಕ್ಕಿಂತ ಮುಂದೆ ಇತ್ತು. ‘ಈಗ ಭಾರತ ಪರಮಾಣು ಮೂಲದಿಂದ ಶೇಕಡಾ 3ರಷ್ಟು ಇಂಧನ ಪಡೆಯುತ್ತಿದೆ.
ಆದರೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತ ಚೀನಾ ಮತ್ತು ರಷ್ಯಾ ದೇಶಗಳಿಗೆ ಸಮನಾಗಿ ನಿಂತಿದೆ’ ಎಂದು ಅಂತರರಾಷ್ಟ್ರೀಯ ಪರಮಾಣುಶಕ್ತಿ ಸಂಸ್ಥೆ (ಐಎಇಎ)ಯ ಮುಖವಾಣಿ ಪತ್ರಿಕೆಯಲ್ಲಿ ಆ ದಿನಗಳಲ್ಲಿ ಪ್ರಕಟಗೊಂಡಿದ್ದ ಲೇಖನ ಹೇಳಿತ್ತು.
2030ನೇ ವರ್ಷದಲ್ಲಿ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಮೂಲಗಳ ಇಂಧನದ ಸ್ಥಿತಿಗತಿ ಏನಿರುತ್ತದೆ ಎಂಬ ಬಗ್ಗೆ ವರದಿಯನ್ನು ಅಮೆರಿಕದ ಇಂಧನ ಇಲಾಖೆಗೆ ಸೇರಿರುವ ‘ಇಂಧನ ಮಾಹಿತಿ ಸಂಸ್ಥೆ’ (ಇಐಎ) ಪ್ರಕಟಿಸಿತ್ತು. ಅದರ ಪ್ರಕಾರ 2005ರಲ್ಲಿ 1,38,000 ಮೆಗಾವಾಟ್ನಷ್ಟಿದ್ದ ಭಾರತದ ಇಂಧನ ಸಾಮರ್ಥ್ಯ 2030ನೇ ವರ್ಷದಲ್ಲಿ 3,98,00 ಮೆಗಾವಾಟ್ನಷ್ಟು ಆಗಲಿದೆ.
ಇದರಲ್ಲಿ ಅಣುಶಕ್ತಿಯ ಪಾಲು 20,000 ಮೆಗಾವಾಟ್ ಮಾತ್ರ. ಅಂದರೆ ಇಷ್ಟೆಲ್ಲಾ ಹೊಸ ಅಣುಸ್ಥಾವರಗಳ ನಿರ್ಮಾಣದ ನಂತರವೂ 2030ರ ವೇಳೆಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇಕಡಾ ಐದರಷ್ಟಾಗಲಿದೆ. ಇದನ್ನು ಇಂಧನ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ಎನ್ನಬಹುದೇ?
ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತಂತೆಯೇ ಕೇಂದ್ರ ಯೋಜನಾ ಆಯೋಗದ ಇಂಧನ ಸಂಬಂಧಿ ಕಾರ್ಯತಂಡ ವರದಿಯೊಂದನ್ನು ನೀಡಿದೆ. ಪರಮಾಣು ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೂ ಅವಕಾಶ ನೀಡುವ ಬಗ್ಗೆಯೂ ಈ ವರದಿಯಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ. ಇವೆಲ್ಲದರ ಪರಿಣಾಮ ಹನ್ನೆರಡನೇ ಯೋಜನೆಯ ಅವಧಿಯಲ್ಲಿ (2012-2017) ನಿಚ್ಚಳವಾಗಿ ಕಾಣಲಿದೆ ಎಂಬ ನಿರೀಕ್ಷೆಯನ್ನು ವರದಿ ವ್ಯಕ್ತಪಡಿಸಿದೆ.
ಇದರ ಆಧಾರದಲ್ಲಿ ಮಾಡಲಾದ ಅಂದಾಜಿನಂತೆ 11 ಮತ್ತು 12ನೇ ಯೋಜನಾ ಅವಧಿಯಲ್ಲಿ 15,960 ಮೆಗಾವಾಟ್ ಅಣುಶಕ್ತಿ ಉತ್ಪಾದನೆಯಾಗಬಹುದು. ಇದರ ಪ್ರಕಾರವೂ ದೇಶದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇ 6.7 ಮಾತ್ರ. ಇದನ್ನು ಕೂಡಾ ಇಂಧನ ಭದ್ರತೆಯಲ್ಲಿ ನಿರ್ಣಾಯಕ ಎಂದು ಹೇಳಲಾಗದು.
ನಾವೆಲ್ಲ ತಿಳಿದುಕೊಂಡ ಹಾಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ಆಗಬಹುದಾದ ಏಕೈಕ ಲಾಭ ಎಂದರೆ ದೇಶದ ಇಂಧನ ಸಾಮರ್ಥ್ಯದ ಹೆಚ್ಚಳ. ಉಳಿದಂತೆ ಆಗಲಿರುವುದು ನಷ್ಟವೇ. ಉದಾಹರಣೆಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ದೇಶದ ಪರಮಾಣು ಅಸ್ತ್ರ ಕಾರ್ಯಕ್ರಮದ ಗತಿ ಏನು ಎಂಬ ಮೂರು ವರ್ಷಗಳ ಹಿಂದಿನ ಪ್ರಶ್ನೆ ಈಗಲೂ ಜ್ವಲಂತವಾಗಿದೆ. ಇದು ಒಪ್ಪಂದದ ಅತ್ಯಂತ ವಿವಾದಾತ್ಮಕ ಅಂಶ. ಪರಮಾಣು ಶಕ್ತಿಯ ನಾಗರಿಕ ಬಳಕೆಯ ಚಟುವಟಿಕೆಗಳಿಗಷ್ಟೇ ಒಪ್ಪಂದ ಅನ್ವಯವಾಗುವುದರಿಂದ ನಾಗರಿಕ ಮತ್ತು ಮಿಲಿಟರಿ ಬಳಕೆಯ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸಬೇಕಾಗಿದೆ.
ನಮ್ಮಲ್ಲಿರುವ 22 ಅಣು ಸ್ಥಾವರಗಳಲ್ಲಿ ಹದಿನಾಲ್ಕು ಮಾತ್ರ ನಾಗರಿಕ ಬಳಕೆಯ ಉದ್ದೇಶದ್ದು ಎಂದು ಹೇಳಿ ಅವುಗಳನ್ನು ಅಂತರರಾಷ್ಟ್ರೀಯ ಸುರಕ್ಷತಾ ಚಕ್ರದೊಳಗೆ ಸೇರಿಸಲು ಭಾರತ ಒಪ್ಪಿಕೊಂಡಿದೆ. ಯುರೇನಿಯಂ ಬಳಕೆಯನ್ನು ಕಡಿಮೆ ಮಾಡಲು ಕಂಡುಹಿಡಿಯಲಾದ ‘ಕಡಿಮೆ ತಿಂದು ಹೆಚ್ಚು ಶಕ್ತಿ ಉತ್ಪಾದಿಸುವ’ ಸ್ವದೇಶಿ ತಂತ್ರಜ್ಞಾನ ಅಳವಡಿಕೆಯ ಫಾಸ್ಟ್ ಬ್ರೀಡರ್ ಸ್ಥಾವರಗಳನ್ನು ನಾಗರಿಕ ಬಳಕೆಯ ಗುಂಪಿನಲ್ಲಿ ಸೇರಿಸಬೇಕೆಂದು ಅಮೆರಿಕ ಒತ್ತಡ ಹೇರುತ್ತಲೇ ಇದೆ.
ಈ ಒಪ್ಪಂದದ ನಂತರ ಮಿಲಿಟರಿ ಬಳಕೆಯ ಅಣುಸ್ಥಾವರಗಳು ಮುಂದೆಂದೂ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಅಮೆರಿಕದ ಪರಮಾಣು ಇಂಧನ ಕಾಯಿದೆ ಪ್ರಕಾರ ‘ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್ಪಿಟಿ) ಸಹಿ ಹಾಕದ ದೇಶಗಳ ಜತೆ ಆ ದೇಶ ಪರಮಾಣು ಸಹಕಾರ ಸಂಬಂಧ ಹೊಂದುವ ಹಾಗಿಲ್ಲ. ಅದರಿಂದ ಭಾರತಕ್ಕೆ ವಿನಾಯಿತಿ ನೀಡಲೆಂದೇ ಹೈಡ್ ಕಾಯಿದೆ ಎನ್ನುವ ಹೆಸರಲ್ಲಿ ಚರ್ಚೆಗೊಳಗಾಗಿದ್ದ ಹೊಸ ಕಾಯಿದೆಯನ್ನು ಅಮೆರಿಕ ರಚಿಸಿದೆ.
ಈ ಕಾಯಿದೆ ಭಾರತಕ್ಕೆ ಕೆಲವು ವಿನಾಯಿತಿ ನೀಡುವ ಜತೆಯಲ್ಲಿ ಕೆಲವು ಷರತ್ತುಗಳನ್ನು ಹೇರಿದೆ. ಅದರ ಪ್ರಕಾರ ಭಾರತ ಸ್ವತಂತ್ರವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಈ ಷರತ್ತು ಉಲ್ಲಂಘಿಸಿದರೆ ಒಪ್ಪಂದ ತನ್ನಿಂದತಾನೇ ರದ್ದಾಗುತ್ತದೆ. ಹೈಡ್ ಕಾಯಿದೆ ರಚನೆಯಾದ ಸಂದರ್ಭದಲ್ಲಿ ಭಾರತದಲ್ಲಿ ವ್ಯಕ್ತವಾದ ವಿರೋಧವನ್ನು ಕಂಡ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ‘ಹೈಡ್ ಕಾಯಿದೆ ಭಾರತಕ್ಕೆ ಅನ್ವಯವಾಗುವುದಿಲ್ಲ, ಅದು ಸಲಹಾ ರೂಪದ್ದು’ ಎಂದು ಮೌಖಿಕವಾಗಿ ಸಮಾಧಾನ ಹೇಳಿದ್ದರು.
ಇದನ್ನೇ ಕಾಂಗ್ರೆಸ್ ಆತ್ಮರಕ್ಷಣೆಗಾಗಿ ಬಳಸುತ್ತಿದೆ. ಆದರೆ ಅಮೆರಿಕ ಬಿಡುಗಡೆಗೊಳಿಸಿರುವ 123 ಒಪ್ಪಂದದ ಪಠ್ಯದಲ್ಲಿನ ಆರ್ಟಿಕಲ್ 2 (ಸಹಕಾರದ ಅವಕಾಶ) ‘... ಎರಡೂ ದೇಶಗಳು ತಮ್ಮಲ್ಲಿನ ಒಪ್ಪಂದ ರಾಷ್ಟ್ರೀಯ ಕಾನೂನುಗಳು ಮತ್ತು ಅವಶ್ಯಕ ಲೈಸೆನ್ಸ್ಗಳಿಗೆ ಅನುಗುಣವಾಗಿ ಒಪ್ಪಂದವನ್ನು ಜಾರಿಗೊಳಿಸಬೇಕು...’ ಎಂದು ಹೇಳಿದೆ. ಅಮೆರಿಕದ ರಾಷ್ಟ್ರೀಯ ಕಾನೂನುಗಳ ವ್ಯಾಪ್ತಿಯಲ್ಲಿ ಹೈಡ್ ಕಾಯಿದೆ ಸೇರಿಕೊಳ್ಳುವುದರಿಂದ ಅದು ಪರಮಾಣು ಸಹಕಾರ ಒಪ್ಪಂದಕ್ಕೆ ಅನ್ವಯವಾಗುತ್ತದೆ.
ಅಣ್ವಸ್ತ್ರ ಪರೀಕ್ಷೆಯ ಮೇಲೆ ಹೇರಲಾಗಿರುವ ಈ ನಿರ್ಬಂಧವನ್ನು ಹಲವಾರು ಹಿರಿಯ ವಿಜ್ಞಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ‘ಹೊಸ ಪರಮಾಣು ಅಸ್ತ್ರಗಳ ತಯಾರಿ ಮಾತ್ರವಲ್ಲ, ಹಳೆಯ ಅಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ನವೀಕರಿಸಲು ಕೂಡಾ ಅಣ್ವಸ್ತ್ರ ಪರೀಕ್ಷೆ ಅಗತ್ಯ’ ಎಂದು ಭಾಭಾ ಅಣು ಸಂಶೋಧನಾ ಕೇಂದ್ರ (ಬಾರ್ಕ್)ದ ನಿವೃತ್ತ ನಿರ್ದೇಶಕ ಎ.ಎನ್. ಪ್ರಸಾದ್ ಹೇಳುತ್ತಿದ್ದಾರೆ.
ಈ ಕಾರಣದಿಂದಾಗಿ ಪರಮಾಣು ಸಹಕಾರ ಒಪ್ಪಂದ ಇನ್ನೊಂದು ರೀತಿಯಲ್ಲಿ ತಮ್ಮ ಭದ್ರತೆಯ ವಿಚಾರದಲ್ಲಿ ಮಾಡಿಕೊಂಡಿರುವ ರಾಜಿ ಎನ್ನುವ ಆರೋಪವನ್ನು ಎದುರಿಸಬೇಕಾಗಿಬಂದಿರುವುದು.ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ನಮ್ಮ ಇಂಧನ ಸಾಮರ್ಥ್ಯ ಗಣನೀಯವಾಗಿ ಹೆಚ್ಚದೆ ಇದ್ದರೂ, ಈ ಒಪ್ಪಂದದಿಂದಾಗಿ ಸೇನಾ ಬಳಕೆಯ ಪರಮಾಣು ಕಾರ್ಯಕ್ರಮಗಳಿಗೆ ಹಿನ್ನಡೆಯಾದರೂ ಮತ್ತು ದೇಶದ ಭದ್ರತೆಯ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಬೇಕಾಗಿ ಬಂದರೂ ಮನಮೋಹನ್ ಸಿಂಗ್ ಅವರು ಯಾಕೆ ಈ ಒಪ್ಪಂದವನ್ನು ಸರ್ಕಾರದ ಜೀವನ್ಮರಣದ ಪ್ರಶ್ನೆ ಮಾಡಿದ್ದರು?
ನಾಗರಿಕ ಬಳಕೆಗಾಗಿ ಅಣುಶಕ್ತಿ ಅಭಿವೃದ್ಧಿಯ ಕಾರ್ಯಕ್ರಮದಂತೆ ಮೇಲ್ನೋಟಕ್ಕೆ ಕಾಣುವ ಪರಮಾಣು ಸಹಕಾರ ಒಪ್ಪಂದದ ಗುಪ್ತವಾಗಿ ಅಮೆರಿಕ ಮತ್ತು ಭಾರತದ ನಡುವಿನ ಸೇನಾ ಒಪ್ಪಂದವೇ? ಈ ಒಪ್ಪಂದ ಭಾರತವನ್ನು ಚೀನಾ ಎದುರು ಎತ್ತಿಕಟ್ಟುವ ಹುನ್ನಾರವೇ ? ತನ್ನಲ್ಲಿರುವ ಎರಡನೇ ದರ್ಜೆ ಅಣುತಂತ್ರಜ್ಞಾನ ಮತ್ತು ಅಣು ರಿಯಾಕ್ಟರ್ಗಳಿಗೆ ಭಾರತದಲ್ಲಿ ಮಾರುಕಟ್ಟೆ ಕುದುರಿಸಲಿಕ್ಕೆ ಈ ಒಪ್ಪಂದವನ್ನು ಮಾಡಿಕೊಂಡಿತೇ? ವಿಕಿಲೀಕ್ಸ್ ಕೇಬಲ್ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾದ ಅಣುಸ್ಥಾವರಗಳ ಸುರಕ್ಷತೆಯ ಪ್ರಶ್ನೆ ಜಪಾನ್ನಲ್ಲಿ ಭೂಕಂಪ ಮತ್ತು ಸುನಾಮಿಯನ್ನು ಎದುರಿಸಲಾಗದೆ ಅಲ್ಲಿನ ಅಣುಸ್ಥಾವರಗಳು ಕುಸಿದುಬಿದ್ದನಂತರ ಹುಟ್ಟಿಕೊಂಡಿದೆ.

No comments:
Post a Comment